ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತಿದೇವಿ
ಮುಕುತಿ ಪಥಕೆ ಮನವೀವ ಮಹಾರುದ್ರದೇವರು
ಹರಿಭಕುತಿ ದಾಯಕಳು ಭಾರತಿದೇವಿ
ಯುಕುತಿ ಶಾಸ್ತ್ರಗಳಲ್ಲಿ ವನಜಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇಟ್ಟು
ಗತಿ ಪಾಲಿಸುವ ನಮ್ಮ ಪವಮಾನನು
ಚಿತ್ತದಲಿ ಆನಂದ ಸುಖವನೀವಳು ರಮಾ
ಭಕುತ ಜನರೊಡೆಯ ನಮ್ಮ ಪುರಂದರ ವಿಠಲನು
ಸತತ ಇವರಲಿ ನಿಂತು ಈ ಕೃತಿಯ ನಡೆಸುವನು
satata gaNanaatha siddhiyaneeva kaaryadali|
mati prErisuvaLu paarvatidEvi||
mukuti pathake manaveeva mahaarudradEvaru|
haribhakuti daayakaLu bhaaratidEvi|
yukuti shaastragaLalli vanajasaMbhavanarasi|
satkarmagaLa naDesi suj~jaana mati ittu|
gati paalisuva namma pavamaananu|
chittadali AnaMda suKavanIvaLu ramaa|
bhakuta janaroDeya namma puraMdara viThalanu|
satata ivarali niMtu E kRutiya naDesuvanu||
No comments:
Post a Comment